ಹಮಾಸ್ ಉಗ್ರರಿದ್ದ ಬಹುಮಹಡಿ ಕಟ್ಟಡ ಹೊಡೆದುರುಳಿಸಿದ ಇಸ್ರೇಲ್ ಸೇನೆ: ವೀಡಿಯೋ ವೈರಲ್

Oct 8, 2023 - 14:37
Oct 8, 2023 - 15:06
 0  77
ಹಮಾಸ್ ಉಗ್ರರಿದ್ದ ಬಹುಮಹಡಿ ಕಟ್ಟಡ ಹೊಡೆದುರುಳಿಸಿದ ಇಸ್ರೇಲ್ ಸೇನೆ: ವೀಡಿಯೋ ವೈರಲ್

ಇಸ್ರೇಲ್ ಬಾಂಬ್‌ ದಾಳಿಗೆ ತುತ್ತಾಗಿ ನೋಡು ನೋಡುತ್ತಿದ್ದಂತೆ ಬಹುಮಹಡಿ ಬೃಹತ್ ಕಟ್ಟಡವೊಂದು ತರಗೆಲೆಯಂತೆ ಕೆಳಗುರುಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಿನ್ನೆ ಇಸ್ರೇಲ್‌ ಮೇಲೆ ದಾಳಿ ನಡೆಸಿದ ಹಮಾಸ್‌ ಉಗ್ರರಿಗೆ ಇಸ್ರೇಲ್ ಕೂಡ ತಕ್ಕ ಎದುರೇಟು ನೀಡಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರು ನೆಲೆಸಿದ್ದ ಬಹುಮಹಡಿ ಕಟ್ಟಡವನ್ನು ಇಸ್ರೇಲ್‌ ಸೇನೆ ಹೊಡೆದುರುಳಿಸಿದೆ. ಇಸ್ರೇಲ್ ಬಾಂಬ್‌ ದಾಳಿಗೆ ತುತ್ತಾಗಿ ನೋಡು ನೋಡುತ್ತಿದ್ದಂತೆ ಬಹುಮಹಡಿ ಬೃಹತ್ ಕಟ್ಟಡವೊಂದು ತರಗೆಲೆಯಂತೆ ಕೆಳಗುರುಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 3 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. 

ಸೆಂಟ್ರಲ್ ಗಾಜಾ ನಗರದಲ್ಲಿ ಇಸ್ರೇಲ್ (Israel) ನಡೆಸಿದವ ವೈಮಾನಿಕ ದಾಳಿಗೆ ಬಹುಮಹಡಿ ಕಟ್ಟಡವೊಂದು ನೆಲಕ್ಕುರುಳಿದೆ. 14 ಅಂತಸ್ತಿನ ಈ ಪ್ಯಾಲೆಸ್ತೀನ್ ಟವರ್ ಹತ್ತಾರು ಕುಟುಂಬಗಳಿಗೆ ನೆಲೆಯಾಗಿತ್ತು. ಜೊತೆಗೆ ಇದು ಭಯೋತ್ಪಾದಕ ಸಂಘಟನೆ ಹಮಾಸ್‌ (Hamas) ಜೊತೆ ನಿಕಟ ಸಂಪರ್ಕ ಹೊಂದಿದ ಕೆಲ ಸಂಸ್ಥೆಗಳ ಕಚೇರಿಗಳನ್ನು ಹೊಂದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಈ ಕಟ್ಟಡದ ನಾಶಕ್ಕೂ ಮೊದಲು ಇಸ್ರೇಲ್  ಇಲ್ಲಿನ ನಿವಾಸಿಗಳಿಗೆ  10 ನಿಮಿಷಗಳ ಕಾಲ ಎಚ್ಚರಿಕೆಯನ್ನು ನೀಡಿತು.

ಇದಕ್ಕೆ ಪ್ರತಿಯಾಗಿ ಕಠಿಣ ಪ್ರತಿಕ್ರಿಯೆ ನೀಡುವುದಾಗಿ ಹಮಾಸ್ ಸಂಘಟನೆ ವಕ್ತಾರ ಅಬು ಒಬೈದಾ (Abu Obeida) ಹೇಳಿದ್ದಾರೆ.  ಭೂಮಿ ಬಿರುಕುಗಳಿಸುವ ಪ್ರತ್ಯುತ್ತರಕ್ಕಾಗಿ ಟೆಲ್ ಅವಿವಾ (ಪ್ರದೇಶ)  ಒಂದು ಕಾಲಿನಲ್ಲಿ ನಿಂತು ಕಾಯುವುದು ಎಂದು ಅವರು ಹೇಳಿದ್ದಾರೆ. ನಿನ್ನೆ ಇಸ್ರೇಲ್ ಮೇಲೆ ಹಮಾಸ್ ಉಗ್ರರು ಸಾವಿರಾರು ರಾಕೆಟ್‌ಗಳನ್ನು ಹಾರಿಬಿಟ್ಟಿದ್ದಲ್ಲದೇ ಹಲವರು ಭಯೋತ್ಪಾದಕರನ್ನು ಇಸ್ರೇಲ್ ನಗರಕ್ಕೆ ನುಗ್ಗಿಸಿದ  ನಂತರ ಇಸ್ರೇಲ್ ಈ ಬೃಹತ್ ಕಟ್ಟಡವನ್ನು ಧ್ವಂಸ ಮಾಡಿದೆ. ತನ್ನ ಕೆಣಕಿದ ಹಮಾಸ್ ಉಗ್ರರ ಹುಟ್ಟಡಗಿಸುವುದಾಗಿ ಇಸ್ರೇಲ್ ಹೇಳಿದೆ.  

ನಾವು ಯುದ್ಧದಲ್ಲಿದ್ದೇವೆ. ಈ ಹೋರಾಟಕ್ಕೆ ಸಾಮೂಹಿಕವಾಗಿ ಸೇನೆ ಸಜ್ಜುಗೊಳಿಸಿದ್ದೇವೆ, ಇದೊಂದು ಕಾರ್ಯಾಚರಣೆ ಅಲ್ಲ, ಇದು ಒಂದು ಸುತ್ತಲ್ಲ, ಇದೊಂದು ಯುದ್ಧ, ನಮ್ಮನ್ನು ಕೆಣಕಿದ ಶತ್ರುಗಳು ನಿರೀಕ್ಷೆಯೂ ಮಾಡದಷ್ಟು ಅಮೂಲ್ಯವಾದ ಬೆಲೆ ತೆರಬೇಕಾಗುತ್ತದೆ. ಶತ್ರುಗಳಿಗೆ ಎಣಿಕೆಗೂ ಸಿಗದಂತಹ ಬೆಂಕಿಯನ್ನು ನಾವು ಮರಳಿಸಲಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ನಿನ್ನೆ ಹೇಳಿದ್ದರು.  

ಇದುವರೆಗೂ ಇಸ್ರೇಲ್ ಪ್ಯಾಲೇಸ್ತೀನ್ ನಡುವಣ ಈ ಹೋರಾಟಕ್ಕೆ 500ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇಸ್ರೇಲ್ ದೇಶಕ್ಕೆ ಅಮೆರಿಕಾ ಬ್ರಿಟನ್, ಸೇರಿದಂತೆ ಹಲವು ಪಾಶ್ಚಾತ್ಯ ರಾಷ್ಟ್ರಗಳು ಬೆಂಬಲಿಸಿವೆ. 

What's Your Reaction?

like

dislike

love

funny

angry

sad

wow