ಬೆಂಗಳೂರಿನ ಪ್ರತಿ 2 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ಸಂಪರ್ಕ ಗುರಿ, ನಮ್ಮ ಮೆಟ್ರೋ ಹೇಳಿರುವ 3 ಹೊಸ ಮಾರ್ಗಗಳು ಯಾವುದು ಗೊತ್ತಾ?

Oct 8, 2023 - 14:34
Oct 8, 2023 - 15:06
 0  98
ಬೆಂಗಳೂರಿನ ಪ್ರತಿ 2 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ಸಂಪರ್ಕ ಗುರಿ, ನಮ್ಮ ಮೆಟ್ರೋ ಹೇಳಿರುವ 3 ಹೊಸ ಮಾರ್ಗಗಳು ಯಾವುದು ಗೊತ್ತಾ?

ಬೆಂಗಳೂರಿನ ಸಂಚಾರ ದಟ್ಟಣೆಯ ಕಿರಿಕಿರಿಗೆ ಪರಿಹಾರವಾಗಿ ನಮ್ಮ ಮೆಟ್ರೋ ಹೊಸ ಮಾರ್ಗಗಳ ಪ್ರಸ್ತಾಪ ಮಾಡಿದೆ. 2032 ರೊಳಗೆ ಎಲ್ಲಾ ಪ್ರದೇಶಕ್ಕೂ 2 ಕಿ.ಮೀ ಗೊಂದು ಮೆಟ್ರೋ ನಾಗರಿಕರಿಗೆ ಸಿಗುವಂತೆ ಯೋಜನೆ ಕೈಗೊಳ್ಳಲು ಗುರಿ ಹೊಂದಲಾಗಿದೆ. ಹೊಸ ಮೆಟ್ರೋ ಮಾರ್ಗಗಳು ಯಾವುದು, ಸದ್ಯ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಸಂಪರ್ಕಗಳು, ಟ್ರಾಫಿಕ್ ಸಮಸ್ಯೆಗೆ ಮಾರ್ಗೋಪಾಯಗಳ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಹೈಲೈಟ್ಸ್‌:

  • ಬೆಂಗಳೂರಿನ ಸಂಚಾರ ದಟ್ಟಣೆ ಪರಿಹರಿಸಲು ಹಲವು ಕ್ರಮಗಳನ್ನು ಸೂಚಿಸಿ ವರದಿ ಬಿಡುಗಡೆ ಮಾಡಿದ್ದು, ಬೆಂಗಳೂರಿನಲ್ಲಿ ಮೂರು ಹೊಸ ಮೆಟ್ರೋ ಕಾರಿಡಾರ್‌ಗಳನ್ನು ಪ್ರಸ್ತಾಪಿಸಲಾಗಿದೆ.
  • ಹಳೆ ವಿಮಾನ ನಿಲ್ದಾಣ ರಸ್ತೆ, ಹಳೇ ಮದ್ರಾಸ್‌ ರಸ್ತೆ ಮತ್ತು ಇನ್ನರ್‌ ರಿಂಗ್‌ ರೋಡ್‌ ಲೂಪ್‌, ಇನ್ನರ್‌ ರಿಂಗ್‌ ರೋಡ್‌ ಲೂಪ್‌ ಯಶವಂತಪುರ, ಕಂಟೋನ್ಮೆಂಟ್‌, ಇಂದಿರಾನಗರ, ಕೋರಮಂಗಲ, ಅಶೋಕ ಪಿಲ್ಲರ್‌ ಮತ್ತು ಮಹಾಲಕ್ಷ್ಮಿ ಲೇಔಟ್‌ ಸಂಪರ್ಕಿಸುವ ಯೋಜನೆ
  • ನಗರದ ನಿವಾಸಿಗಳು 2032 ರ ವೇಳೆಗೆ ತಮ್ಮ ಮನೆಯಿಂದ ಅಥವಾ ಕೆಲಸ ಸ್ಥಳದಿಂದ ಕೇವಲ 1-2 ಕಿ.ಮೀ. ಒಳಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವುದು ಮತ್ತು ಸುಲಭ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಇನ್ನಷ್ಟು ಮೆಟ್ರೋ ಮಾರ್ಗಗಳನ್ನು ನಿರ್ಮಿಸುವ ಸಂಬಂಧ ಯೋಜನೆ ರೂಪಿಸಲಾಗಿದೆ.

What's Your Reaction?

like

dislike

love

funny

angry

sad

wow