ವಾಹನ ವಿಮೆಯಲ್ಲಿ ಏರಿಳಿತ ಆಗಬಹುದು -ವಿಮಾ ನಿಯಂತ್ರಣ ಮಂಡಳಿಯಿಂದ ಹೊಸ ನಡೆ.
irda-appoints-taskforce,

ಭಾರತದ ವಿಮಾ ನಿಯಂತ್ರಣ ಮಂಡಳಿ ವಿಮಾ ತರ್ಡ್ ಪಾರ್ಟಿ ಮೊತ್ತವನ್ನು ಮುಕ್ತಗೊಳಿಸಲು ಚಿಂತಿಸುತ್ತಿದೆ.ವರದಿ ನೀಡಲು ಸಮಿತಿ ರಚಿಸಿದ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ.
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ಪರಿಹಾರಗಳು ಮತ್ತು ಮಾರ್ಗಸೂಚಿಗಳನ್ನು ಸೂಚಿಸಲು ಸಮಿತಿಯನ್ನು ರಚಿಸಿದೆ.ಜೆನೆರಲ್ ಇನ್ಸುರನ್ಸ್ ಕಂಪನಿಗಳು ತರ್ಡ್ ಪಾರ್ಟಿ ಮೊತ್ತವನ್ನುತಾವೆ ನಿಗದಿಗೊಳಿಸುವ ಸಂಧರ್ಭ ಈ ಮೂಲಕ ಬರುತ್ತದೆ.ಈ ವಿಷಯದ ಮೇಲೆ ವಿಮಾ ನಿಯಂತ್ರಣ ಮಂಡಳಿಯು ಆಸಕ್ತಿ ವಹಿಸಿದ್ದು,ಸಮಿತಿಯನ್ನು ರಚಿಸಿ ಆದೇಶಿಸಿದೆ.
ವಿಮಾ ಮೊತ್ತದ ಬದಲಾವಣೆಯ ಡಿ-ಟ್ಯಾರಿಫಿಕೇಶನ್ ಗೆಜೆಟ್ ಲ್ಲಿ ಪ್ರಕಟಿಸಬೇಕಾಗಿದ್ದು,ವಿಮಾ ನಿಯಂತ್ರಣ ಮಂಡಳಿಯು ವಿಮಾ ಸಲಹಾ ಸಮಿತಿಯ ಅಧ್ಯಕ್ಷರಾಗಿ ರಾಜೇಂದ್ರ ಬೇರಿ ,ಆರು ವಿಮಾ ಕಂಪನಿಯ ಪ್ರತಿನಿಧಿಗಳು , ಒಬ್ಬ ಮರು-ವಿಮಾ ಕಂಪನಿಯ ಪ್ರತಿನಿಧಿ ಮತ್ತು ಕಾರ್ಯ ನಿರ್ವಾಹಕ ಸಂಚಾಲಕರಾಗಿ. ರಂದೀಪ್ ಸಿಂಗ್ ಜಗ್ಪಾಲ್ ಈ ಸಮಿತಿಯಲ್ಲಿ ನೇಮಕ ಗೊಂಡಿದ್ಧಾರೆ.
ಈಗ ಮೋಟಾರು ವಿಮೆಯ TP ಘಟಕ, ಅದರ ಪ್ರೀಮಿಯಂ ಅನ್ನು ಮೊದಲೇ ನಿರ್ಧರಿಸಲಾಗುತ್ತಿದೆ. ವಿಮಾ ನಿಯಂತ್ರಣ ಮಂಡಳಿ ತೀರ್ಮಾನಿಸುವ ಈ ಮೊತ್ತವು ಭಾರತದೆಲ್ಲೆಡೆ , ಎಲ್ಲಾ ವಿಮಾ ಕಂಪನಿಗಳಲ್ಲಿ ಸರಿಸಮಾನ ಇತ್ತು.
ಈ ಸಮಿತಿಯ ಶಿಫಾರಸಿನಿಂದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಇದರಲ್ಲಿ ಬದಲಾವಣೆ ತಂದರೆ,ವಿಮಾ ಕಂಪನಿಗಳು ವಿಮೆಯ TP ಘಟಕ ವನ್ನೂ ನಿರ್ಧರಿಸುವ ಅಧಿಕಾರ ದೊರೆಯುತ್ತದೆ.
ಈ ಕಾರಣದಿಂದ ಕೆಲವು ವಾಹನ ವಿಮೆಯ ಬೆಲೆಯಲ್ಲಿ ಕಡಿಮೆ ಹಾಗೂ ಹೆಚ್ಚಳ ಕಾಣಬಹುದು.ಇದು ಸಮಿತಿಯ ಶಿಫಾರಸಿನಿಂದ ಮಾತ್ರ ಗೊತ್ತಾಗುತ್ತದೆ.ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ತನ್ನ ಶಿಫಾರಸುಗಳನ್ನು ಸಲ್ಲಿಸಲು ಈ ಸಮಿತಿಗೆ ಮೂರು ವಾರಗಳ ಕಾಲಾವಧಿಯನ್ನು ಕೊಟ್ಟಿದೆ.
What's Your Reaction?






